ಲೀನಾ ಮೊಹಂತಿ ಅವರು ಒಡಿಸ್ಸಿ ನೃತ್ಯದ ಪ್ರಮುಖ ಪ್ರತಿಪಾದಕರು. ಇವರು ಗುರು ದೇವಾ ಪ್ರಸಾದ ದಾಸ್ ಅವರ ಶಿಷ್ಯೆಯಾದ್ದರು. ಇವರು ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿಯನ್ನು ಪಡೆದಿದ್ದಾರೆ. ಜೊತೆಗೆ ಐ‌ಸಿ‌ಸಿ‌ಆರ್‌ನ ಎಂಪನೆಲ್ಡ್ ಕಲಾವಿದರಾಗಿ ಮಹಾರಿ ಪ್ರಶಸ್ತಿ, ಸಂಜುಕ್ತ ಪಾಣಿಗ್ರಾಹಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇವರು ನೃತ್ಯ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ್ದಾರೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿದ್ದಾರೆ. ಅವರು ಒಡಿಶಾದ ಭುವನೇಶ್ವರ್‌ನ ಬನ್ಸಿ ಬಿಲಾಸ್‌ನ ಕಲಾತ್ಮಕ ನಿರ್ದೇಶಕರಾಗಿದ್ದಾರೆ ಮತ್ತು ಮಲೇಷ್ಯಾದ ಕೌಲಾಲಂಪುರ್‌ನಲ್ಲಿರುವ ಕಲ್ಪನಾ ಡ್ಯಾನ್ಸ್ ಥಿಯೇಟರ್‌ನ ಒಡಿಸ್ಸಿ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇವರು ನ್ಯೂಯಾರ್ಕ್‌ನ ತ್ರಿನಯನ್ ನೃತ್ಯ ಕೇಂದ್ರದ ಮುಖ್ಯಸ್ಥರಾಗಿದ್ದಾರೆ. == ಆರಂಭಿಕ ಜೀವನ == ಲೀನಾ ಮೊಹಂತಿ ಭಾರತದ ಒಡಿಶಾದಲ್ಲಿನ ಭುವನೇಶ್ವರದ ಉದ್ಯಮಿ ರಬಿನಾರಾಯಣ ಮೊಹಂತಿ ( ಗುರುದಾಸ್ ) ಮತ್ತು ಕವಿ ಸ್ವರ್ಣ ಮೊಹಂತಿ ದಂಪತಿಗೆ ಜನಿಸಿದರು. ಇವರಿಗೆ ನಾಲ್ಕನೇ ವಯಸ್ಸಿನಲ್ಲಿ ಒಡಿಸ್ಸಿದ ನೃತ್ಯ ಪರಿಚಯವಾಗಿತ್ತು. ಒಡಿಸ್ಸಿಯ ನಾಲ್ಕು ಮೊದಲ ತಲೆಮಾರಿನ ಗುರುಗಳಲ್ಲಿ ಒಬ್ಬರಾದ ದೇವಾ ಪ್ರಸಾದ್ ದಾಸ್ ಅವರಲ್ಲಿ ಮೊದಲು ನೃತ್ಯ ತರಬೇತಿ ಪಡೆದರು. ದೇವಾ ಪ್ರಸಾದ್‌ರ ನಿಧನದ ನಂತರ ಇವರು ಮುಂದೆ ಗುರು ದುರ್ಗಾ ಚರಣ್ ರಣಬೀರ್ ಅವರಲ್ಲಿ ನೃತ್ಯದ ತರಬೇತಿಯನ್ನು ಮುಂದುವರೆಸಿದರು. ಅವರು ಇನ್ನೂ ಒಡಿಸ್ಸಿ ನೃತ್ಯವನ್ನು ಪ್ರದರ್ಶಿಸುವುದನ್ನು ಮತ್ತು ಕಲಿಸುವುದನ್ನು ಮುಂದುವರೆಸಿದ್ದಾರೆ. ಇವರು ಗುರುದಾಸ್ ನಿರ್ದೇಶಿಸಿದ ಒಡಿಯ ಚಲನಚಿತ್ರದ ಬಸಂತರಸ ( ೧೯೪೮) ದಲ್ಲಿ ಶ್ರೀಮತಿ ರಾಧಾ ಅವರ ನಿಷ್ಠಾವಂತ ಸ್ನೇಹಿತೆಯಾಗಿದ್ದ ಲಲಿತಾ ಪಾತ್ರವನ್ನು ನಿರ್ವಹಿಸಿದ್ದಾರೆ. == ಪ್ರಶಸ್ತಿಗಳು == ನವ ದೆಹಲಿಯ ಸಂಗೀತ ನಾಟಕ ಅಕಾಡೆಮಿಯಿಂದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ೨೦೦೬ ಪುರಸ್ಕೃತರು. ಮಹಾರಿ ಪ್ರಶಸ್ತಿ ಪುರಸ್ಕೃತರು, ೨೦೦೬. ಸಂಜುಕ್ತ ಪಾಣಿಗ್ರಾಹಿ ಪ್ರಶಸ್ತಿ ಪುರಸ್ಕೃತರು, ಪತಿತಪವನ್ ಕಲಾ ನಿಕೇತನ, ನವದೆಹಲಿ. ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ನೃತ್ಯದಲ್ಲಿ ಜೂನಿಯರ್ ಫೆಲೋಶಿಪ್ ಪಡೆದರು. ಭಾರತದ ಸಂಸ್ಕೃತಿ ಇಲಾಖೆ, ಸರ್ಕಾರದಿಂದ ಒಡಿಸ್ಸಿ ನೃತ್ಯದಲ್ಲಿ ಹಿರಿಯ ರಾಷ್ಟ್ರೀಯ ವಿದ್ಯಾರ್ಥಿವೇತನವನ್ನು ಪಡೆದರು. ಭಾರತದ ಮುಂಬೈನ ಸುರ್ಸಿಂಗರ್ ಸಂಸದ್ ಅವರಿಂದ ಸಿಂಗರಮಣಿ ಎಂಬ ಬಿರುದನ್ನು ನೀಡಲಾಯಿತು. ಇಂಡಿಯನ್ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಶನ್ಸ್ ( ಐ‌ಸಿ‌ಸಿ‌ಆರ್ ) ನ ಎಂಪನೆಲ್ಡ್ ಕಲಾವಿದರು. == ಉಲ್ಲೇಖಗಳು == ://../ ://.//. ://.// ://...////2013/07/23/------/ ://../2010/08/21///21fringe. ://..//-/ ://..//--/280718/---. ://..///---------------/article66086210. ://..//--/040818/--. ://..///---/article21289124. ://..//--0 ://..//---star2/20170708/281749859386213